ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷವಂದದ ದಶಮಾನೋತ್ಸವ, ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಜನವರಿ 10 , 2015
ಜನವರಿ 10, 2015

ಯಕ್ಷವಂದದ ದಶಮಾನೋತ್ಸವ, ಸನ್ಮಾನ

ಸಿದ್ದಾಪುರ : ತಾಲೂಕಿನ ವಾಜಗದ್ದೆಯ ದುರ್ಗಾ ವಿನಾಯಕ ಸಭಾಭವನದಲ್ಲಿ ಆಂಜನೇಯ ಕಪಾ ಯಕ್ಷವಂದ ಕೇಡಲಸರದ ದಶಮಾನೋತ್ಸವದ ಅಂಗವಾಗಿ 22 ಯಕ್ಷಗಾನ ಕಲಾವಿದರಿಗೆ ಸನ್ಮಾನ ಹಾಗೂ ಉಚಿತ ಯಕ್ಷಗಾನ ಪ್ರದರ್ಶನ ಜ.11 ಹಾಗೂ 12ರಂದು ಸಂಜೆ 5.30ಕ್ಕೆ ನಡೆಯಲಿದೆ ಎಂದು ದುರ್ಗಾವಿನಾಯಕ ಯಕ್ಷಮಿತ್ರ ಬಳಗದ ಅಧ್ಯಕ್ಷ ಗಣೇಶ ಹೆಗಡೆ ಮತ್ತಿಗಾರ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಜೀರಿಯಾದ ಉದ್ಯಮಿ ರಾಜಶೇಖರ ಹಂದೆ ಉಪ್ಪಿನಕುದ್ರು ಕಾರ್ಯಕ್ರಮದ ಪೋಷಕರಾಗಿದ್ದು ಮೇಳದ ವ್ಯವಸ್ಥಾಪಕರಾಗಿ ಸುಧಾಕರ ರಾವ್ ಹೆಗ್ಗೋಡು ಕಾರ್ಯ ನಿರ್ವಹಿಸಲಿದ್ದಾರೆ. ದುರ್ಗಾವಿನಾಯಕ ದೇವಸ್ಥಾನ ಆಡಳಿತ ಮಂಡಳಿ, ದುರ್ಗಾವಿನಾಯಕ ಯಕ್ಷಮಿತ್ರ ಬಳಗ ಹಾಗೂ ಯುವಕ ಸಂಘ ವಾಜಗದ್ದೆ ಸಹಕಾರ ನೀಡಲಿವೆ.

ಜ.11ರಂದು ಸಂಜೆ 5.30ಕ್ಕೆ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಉದ್ಘಾಟಿಸುವರು. ನಾರಾಯಣ ಭಾಗವತ ನೆಬ್ಬೂರು ಅಧ್ಯಕ್ಷತೆ ವಹಿಸುವರು. ಆರ್.ಎಂ.ಹೆಗಡೆ ಬಾಳೇಸರ, ಉಮಾಕಾಂತ ಭಟ್ಟ ಮೇಲುಕೋಟೆ, ಪ್ರೊ.ಎಂ.ಎ.ಹೆಗಡೆ ದಂಟಕಲ್, ಶಿವಾನಂದ ಹೆಗಡೆ ಕೆರೆಮನೆ, ಆರ್.ಜಿ.ಭಟ್ಟ ವರ್ಗಾಸರ, ಅನಂತ ಶಾನಭಾಗ ಹಾರ್ಸಿಕಟ್ಟಾ, ರಾಜಶೇಖರ ಹಂದೆ ಉಪಸ್ಥಿತರಿರುತ್ತಾರೆ.

ರಾತ್ರಿ 9ಕ್ಕೆ ಯಾಜಿ ಯಕ್ಷಮಿತ್ರ ಮಂಡಳಿಯಿಂದ ಭೀಷ್ಮಪರ್ವ, ಕೆರೆಮನೆ ಮೇಳದವರಿಂದ ಸುಭದ್ರಾ ಕಲ್ಯಾಣ, ಕೇಡಲಸರ ಮೇಳದವರಿಂದ ಜಾಂಬವತಿ ಕಲ್ಯಾಣ, ಬಂಗಾರಮಕ್ಕಿ ಮೇಳದವರಿಂದ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಜ.12ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆ ವಹಿಸುವರು.ರಾಜಶೇಖರ ಹಂದೆ ಭಾಷಣ ಮಾಡುವರು. ಹೊಸ್ತೋಟ ಮಂಜುನಾಥ ಭಾಗವತ, ಗೋಪಾಲ ಹೆಗಡೆ ವಾಜಗದ್ದೆ ಹಾಗೂ ಬಂಗಾರ್ಯ ನಾಯ್ಕ ಹಳಿಯಾಳ ಉಪಸ್ಥಿತರಿರುತ್ತಾರೆ.

ರಾತ್ರಿ 9ರಿಂದ ಕೊಂಡದಕುಳಿ ತಂಡದವರಿಂದ ರಾಜಾ ಉಗ್ರಸೇನ-ಕಂಸ ದಿಗ್ವಿಜಯ, ಕೇಡಲಸರ ತಂಡದವರಿಂದ ದಕ್ಷಯಜ್ಞ, ಜಲವಳ್ಳಿ ಯಕ್ಷಬಳಗದವರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಇದೇ ಸಂದರ್ಭದಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಜೀವಮಾನ ಸಾಧನೆಗಾಗಿ ಯಕ್ಷರಾಜ ಪ್ರಶಸ್ತಿ ನೀಡಲಿದ್ದು,ಒಟ್ಟೂ 22 ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ರಾಘವ ಹೆಗಡೆ ವಾಜಗದ್ದೆ, ಪರಮೇಶ್ವರ ಹೆಗಡೆ ಕಲ್ಮನೆ ಉಪಸ್ಥಿತರಿದ್ದರು.



ಕೃಪೆ : http://vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ